ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಬೈ ಕನ್ನಡಿಗರೊಂದಿಗೆ ‌ಗೋವಿಂದ ಕಾರಜೋಳ ವಿಡಿಯೊ ಸಂವಾದ 

Last Updated 12 ಮೇ 2020, 11:35 IST
ಅಕ್ಷರ ಗಾತ್ರ

ಬೆಂಗಳೂರು: ದುಬೈ ಕನ್ನಡಿಗರೊಂದಿಗೆ ಉಪಮುಖ್ಯಮಂತ್ರಿ ‌ಗೋವಿಂದ ಎಂ.ಕಾರಜೋಳ ಮಂಗಳವಾರ ವಿಡಿಯೊ ‌ಸಂವಾದ ನಡೆಸಿ, ಅಹವಾಲುಗಳನ್ನು ಆಲಿಸಿದರು.

ಲಾಕ್ಡೌನ್ ಆದ ನಂತರ ಮೊದಲ ಬಾರಿಗೆ ದುಬೈನಿಂದ ಇಂದು‌ ಕನ್ನಡಿಗರು ನಾಡಿಗೆ ಆಗಮಿಸಲಿದ್ದು, ಅವರನ್ನು ಸ್ವಾಗತಿಸಿದ ಡಿಸಿಎಂ, ಸಮಾಜ ಕಲ್ಯಾಣ ಇಲಾಖೆಯಿಂದ ವಸತಿ ಶಾಲೆ, ವಸತಿ ನಿಲಯಗಳಲ್ಲಿ ಕ್ವಾರಂಟೈನ್ ನಲ್ಲಿರುವವರಿಗೆ ಉಚಿತ ಊಟೋಪಚಾರ ಮಾಡಲಾಗುತ್ತಿದೆ. ಹೊರರಾಜ್ಯ, ಹೊರ ದೇಶಗಳಿಂದ ಬರುವವರು ಇಚ್ಛಿಸಿದರೆ ವಸತಿ ನಿಲಯಗಳಲ್ಲಿ ಕ್ವಾರಂಟೈನ್ ನಲ್ಲಿಡಲು ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿರ್ದೇಶನ ಹಾಗೂನಿಬಂಧನೆಗಳನ್ನು‌ ಒಪ್ಪಿ ಬರುವವರೆಗೆ ಕ್ವಾರಂಟೈನ್ನಲ್ಲಿಟ್ಟು, ನಿಗಾವಹಿಸಲಾಗುವುದು. ಪ್ರಧಾನ ಮಂತ್ರಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಆರಂಭದಲ್ಲೇ ಕೈಗೊಂಡ ದೃಢ ನಿರ್ಧಾರ, ಮುಂಜಾಗ್ರತಾ‌ ಕ್ರಮಗಳಿಂದ ದೇಶ ಹಾಗೂ ರಾಜ್ಯದಲ್ಲಿ ಕೊರೊನಾ ಉಲ್ಬಣವಾಗಿಲ್ಲ.ರಾಜ್ಯ ಸರ್ಕಾರವು ಸಾಕಷ್ಟು ಸೌಲಭ್ಯ ನೀಡುತ್ತಿದೆ. ಈ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT